in

ಸೀಮಾ ಹೈದರ್ ಜೀವನ ಚರಿತ್ರೆ | Seema Haider Biography In Kannada

ಸೀಮಾ ಹೈದರ್ ಜೀವನ ಚರಿತ್ರೆ | Seema Haider Biography In Kannada

ಸೀಮಾ ಹೈದರ್ ಒಬ್ಬ ಪಾಕಿಸ್ತಾನಿ ಮಹಿಳೆ, ಈಕೆಗೆ 30 ವರ್ಷ ಆಸುಪಾಸಿನ ಪ್ರಾಯ. ತನ್ನ 25 ವರ್ಷದ ಪ್ರೇಮಿ ಸಚಿನ್ ಮೀನಾ ಜೊತೆ ಇರಲು ಈ ಸೀಮಾ ಹೈದರ್ ತನ್ನ ನಾಲ್ವರು ಮಕ್ಕಳೊಂದಿಗೆ ಅಕ್ರಮವಾಗಿ ಭಾರತ ದೇಶಕ್ಕೆ ಪ್ರವೇಶಿಸುತ್ತಾಳೆ ಅದಕ್ಕಾಗಿ ಅವಳು ಜುಲೈ 4 ರಂದು ಭಾರತದಲ್ಲಿ ಬಂಧಿಸಲ್ಪಟ್ಟಳು.

ಸೀಮಾ ಹೈದರ್ ಯಾರು?

ಸೀಮಾ ಹೈದರ್ ಬಗ್ಗೆ ಹಲವಾರು ವಿಡಿಯೋಗಳು ವೈರಲ್ ಆಗಿವೆ. ಅದೆಲ್ಲಕ್ಕೂ ಕಾರಣ ಆಕೆ ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ಬಂದದ್ದು. ಹೌದು ಸೀಮಾ ಹೈದರ್ ಪಾಕಿಸ್ತಾನಿ ಮಹಿಳೆ, ಸೀಮಾ ಹೈದರ್ 1996 ರಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಜನಿಸಿದರು. ಆಕೆಗೆ ಮದುವೆಯಾಗಿ 4 ಮಕ್ಕಳಿದ್ದಾರೆ.

ಆಕೆಯ ಪತಿಯ ಹೆಸರು ಗುಲಾಮ್ ಹೈದರ್ ಸೌದಿ ಅರೇಬಿಯಾದಲ್ಲಿ ಉದ್ಯೋಗಿ. ಈಕೆ ಜನಪ್ರಿಯ ವಿಡಿಯೋ ಗೇಮ್ PUBG ಆಡುವ ಮೂಲಕ ಸಚಿನ್ ಮೀನಾ ರ ಪರಿಚಯವಾಗಿ ಪ್ರೇಮಕ್ಕೆ ತಿರುಗುತ್ತದೆ.

ಸೀಮಾ ಹೈದರ್ ಜೀವನ ಚರಿತ್ರೆ  | Seema Haider Biography In Kannada

ಸೀಮಾ ಹೈದರ್ ಅವರ ಜೀವನ ಪರಿಚಯ

ಹೆಸರು ಸೀಮಾ ಹೈದರ್
ಜನ್ಮ ದಿನಾಂಕ ವರ್ಷ 1996
ಜನ್ಮಸ್ಥಳ ಸಿಂಧ್, ಪಾಕಿಸ್ತಾನ
ಧರ್ಮ ಇಸ್ಲಾಂ (ಹಿಂದೂ – 2023)
ವಯಸ್ಸು 27 ವರ್ಷಗಳು (2023 ರಂತೆ)
ರಾಷ್ಟ್ರೀಯತೆ ಪಾಕಿಸ್ತಾನಿ
ತವರು ಪಟ್ಟಣ ಸಿಂಧ್ ಪಾಕಿಸ್ತಾನ
ಎತ್ತರ (ಅಂದಾಜು) 5 ಅಡಿ 4 ಇಂಚುಗಳು
ಕಣ್ಣುಗಳ ಬಣ್ಣ ಕಪ್ಪು
ಶೈಕ್ಷಣಿಕ ಅರ್ಹತೆ ತಿಳಿದಿಲ್ಲ
ಹವ್ಯಾಸಗಳು ತಿಳಿದಿಲ್ಲ
ವೈವಾಹಿಕ ಸ್ಥಿತಿ ವಿವಾಹಿತರು
ನಿವ್ವಳ ಮೌಲ್ಯ ತಿಳಿದಿಲ್ಲ

ಕೆಲವು ವರದಿಯ ಪ್ರಕಾರ ಆಕೆ ತನ್ನ ಜೀವನದಲ್ಲಿ ಅನುಭವಿಸುತ್ತಿದ್ದ ದೌರ್ಜನ್ಯದಿಂದ ಎಲ್ಲವನ್ನೂ ತೊರೆದಳು ಎನ್ನಲಾಗುತ್ತಿದೆ. ಆಕೆ ಪಾಕಿಸ್ತಾನ ತೊರೆದು ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ದೆಹಲಿಗೆ ಸಮೀಪವಿರುವ ಗ್ರೇಟರ್ ನೋಯ್ಡಾದಲ್ಲಿ ತಂಗುತ್ತಾರೆ.

ಸೀಮಾ ಹೈದರ್ ಜೀವನ ಚರಿತ್ರೆ  | Seema Haider Biography In Kannada

ಮದುವೆಯಾಗಿ 4 ಮಕ್ಕಳ ತಾಯಿಯೂ ಆಗಿರುವ ಮುಸ್ಲಿಂ ಮಹಿಳೆಯನ್ನು ಹಿಂದೂ ಹುಡುಗನೊಬ್ಬ ಪ್ರೀತಿಸಿದ್ದು ನಂಬಲಸಾಧ್ಯ.

ಸೀಮಾ ಹೈದೆರ್ ಧಾರ್ಮಿಕ ಲಾಕೆಟ್ ಧರಿಸಿ ಸಚಿನ್ ಜೊತೆ ತುಳಸಿ ಪೂಜೆ ನಡೆಸುತ್ತಿರುವುದು ಕಂಡುಬಂದಿದೆ ಎಂದು ಝೀ ನ್ಯೂಸ್ ಹಂಚಿಕೊಂಡಿದೆ. ಆಕೆ ತನ್ನ ಪ್ರೀತಿಗಾಗಿ ತನ್ನ ಧರ್ಮವನ್ನು ಪರಿವರ್ತಿಸಿದಂತಿದೆ ಎಂದು ವರದಿಯಿಂದ ತಿಳಿದು ಬಂದಿದೆ. ಸೀಮಾ ಹಿಂದೂ ಧರ್ಮ ಮತ್ತು ಭಾರತೀಯ ಸಂಸ್ಕೃತಿಯನ್ನು ಸ್ವೀಕರಿಸಿದ್ದಾರೆ, ಸಚಿನ್ ಅವರ ಕುಟುಂಬದಂತೆ ಸಸ್ಯಾಹಾರಿಯಾಗಲು ಬಯಸುತ್ತಾರೆ ಎನ್ನಲಾಗಿದೆ.

ಸೀಮಾ ಗುಲಾಮ್ ಹೈದರ್ ಮದುವೆಯ ನಂತರ ಸಮಯದಲ್ಲಿ ಆತನಿಂದ ದೈಹಿಕ ಕಿರುಕುಳ ಅನುಭವಿದ್ದಾಳೆಂದು ತಾನೇ ಹೇಳಿಕೊಂಡಿದ್ದಾಳೆ. ಗುಲಾಮ್ ಹೈದರ್ ತನ್ನ ಪತ್ನಿ ಮತ್ತು ಮಕ್ಕಳನ್ನು ಪಾಕಿಸ್ತಾನಕ್ಕೆ ಹಿಂದಿರುಗಿಸಲು ಸಹಾಯ ಮಾಡುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಸೀಮಾ ತನ್ನ ಮಕ್ಕಳೊಂದಿಗೆ ಪಾಕಿಸ್ತಾನದಲ್ಲಿರುವ ಕರಾಚಿಯಲ್ಲಿ ಉಳಿದುಕೊಂಡಿದ್ದಳು. ಆಕೆಯ ಕುಟುಂಬದ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳು ಈವರೆಗೂ ಲಭ್ಯವಾಗಿಲ್ಲ.

ಸೀಮಾ ಐಎಸ್‌ಐ ಏಜೆಂಟ್ ಅಥವಾ ಅಲ್ಲವೇ?

ಅದಕ್ಕಾಗಿ ಮೂಲ ಸಂಗತಿಗಳನ್ನು ಬಹಿರಂಗಪಡಿಸುವ ಕೆಲಸದಲ್ಲಿ ಅಧಿಕಾರಿಗಳು ತೊಡಗಿದ್ದಾರೆಯಂತೆ. ಆಕೆಯ ಬಳಿ 3 ಐಡಿಗಳಿವೆ ಸಿಕ್ಕಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಮೂರು ಐಡಿಗಳು ಒಂದು ಅವಳ ತಂದೆಯದು, ಎರಡನೆಯದು ಅವಳ ಗಂಡನ ಗುಲಾಮ್, ಮತ್ತು ಮೂರನೆಯದು ಅವಳು ಪ್ರಸ್ತುತ ಬಳಸುತ್ತಿರುವದು.

ಇದಲ್ಲದೆ ಆಕೆಯ ಬಳಿ COVID-19 ಲಸಿಕೆ, ಗುರುತಿನ ಪುರಾವೆ ಮತ್ತು ಹೆಚ್ಚಿನವುಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಒಂದು ಕುತೂಹಲಕಾರಿ ಅಂಶವೆಂದರೆ ಸೀಮಾ ಐದು ಪಾಸ್‌ಪೋರ್ಟ್‌ಗಳನ್ನು ಹೊಂದಿದೆಯಂತೆ. ಇದರಿಂದಾಗಿ ಕೆಲವರು ಆಕೆಯ ಉದ್ದೇಶಗಳನ್ನು ಅನುಮಾನಿಸಲು ಕಾರಣವಾಗಿದೆ.

Written by admin

Leave a Reply

Your email address will not be published. Required fields are marked *

ಎಲ್ವಿಶ್ ಯಾದವ್ ಜೀವನ ಚರಿತ್ರೆ | Elvish Yadav Biography

ಎಲ್ವಿಶ್ ಯಾದವ್ ಜೀವನ ಚರಿತ್ರೆ | Elvish Yadav Biography In Kannada

ನಿತೀಶ್ ಕುಮಾರ್ ಜೀವನಚರಿತ್ರೆ | Nitish Kumar Biography In Kannada

ನಿತೀಶ್ ಕುಮಾರ್ ಜೀವನಚರಿತ್ರೆ | Nitish Kumar Biography In Kannada